ಅನಿಲದ ಕೋಣೆ
	ಮರಣ ದಂಡನೆಗೆ ಗುರಿಯಾದ ಅಪರಾಧಿಗಳನ್ನು ತಲೆ ಕಡಿದೋ ನೇಣು ಹಾಕೋ ಸಾಯಿಸುವ ಕ್ರೂರ ವಿಧಾನವನ್ನು ಬಿಟ್ಟು ಮಾನವೀಯ ರೀತಿಯಲ್ಲಿ ಸಾಯಿಸಲು, ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಬಳಕೆಯಲ್ಲಿರುವ ಕೋಣೆ. ಮೊಟ್ಟಮೊದಲು (1924) ನಿವಾಡ ಸಂಸ್ಥಾನದಲ್ಲಿ ಜಾರಿಗೆ ತಂದರೂ ಕೇವಲ ನಾಲ್ಕರಲ್ಲಿ ಒಂದು ಸಂಸ್ಥಾನದಲ್ಲಿ ಈ ತೆರನ ದಂಡನೆ ವಿಧಿಸಿದ್ದಾರೆ. ಎಲ್ಲ ಕಡೆಗಳಲ್ಲೂ ಮುದ್ರೆ ಬಿಗಿಸಿರುವ ಒಂದು ಚಿಕ್ಕ ಕೋಣೆಯಲ್ಲಿ ಅಪರಾಧಿಯನ್ನು ಕುರ್ಚಿಯಲ್ಲಿ ಕೂರಿಸಿ, ಬಿಗಿದು ವಿಷದ ಅನಿಲವನ್ನು ಒಳಕ್ಕೆ ಬಿಡುವರು. ಬಂದಿ ಆಳವಾಗಿ ಉಸಿರು ಎಳೆದುಕೊಂಡಾಗ ವಿಷದ ಅನಿಲದ ಹೊಗೆಯಿಂದ ತಟಕ್ಕನೆ ಕುಸಿದುಬಿದ್ದು ನೋವಿಲ್ಲದೆ ಅಸು ನೀಗುತ್ತಾನೆ. ಆದರೆ ಬಹಳ ಮಂದಿ ಉಸಿರು ಕಟ್ಟಿ ಹಿಡಿದು ನಿಧಾನವಾಗಿ ಸ್ವಲ್ಪ ಸ್ವಲ್ಪವಾಗಿ ಉಸಿರಾಡುವರು. ಅಂಥವರು ಸಾಯುವ ಮುನ್ನ ತುಂಬ ಹೊತ್ತು ನರಳಾಡಬೇಕಾಗುವುದು.
(ನೋಡಿ- ಮರಣದಂಡನೆ)
(ನೋಡಿ- ಎರಡನೆಯ-ಮಹಾಯುದ್ಧ)								
    
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ